Friday, May 11, 2012

ನೆನಪು

ನನ್ನ ಪ್ರೀತಿಯ ಕಡೆಗಣಿಸಿ ಹೋದೆಯಾ ಗೆಳೆಯ
ನಿನ್ನ ಗೆಳತಿ ನಾನೆಂದು ಬೀಗುತಿದ್ದೆನಲ್ಲ
ನನ್ನ ಪ್ರೀತಿಗೆ ಕಳಂಕ ಹೊದೆಸಿ ಹೋದೆಯಾ ಗೆಳೆಯ

ನಿನಗಾಗಿ ಎಸ್ಟೊಂದು ಪರಿತಪಿಸಿದೆನಲ್ಲ
ಪ್ರತಿ ನಿಮಿಷ ನಿನಗಾಗಿ ಹಂಬಲಿಸಿದೆನಲ್ಲ
ನನ್ನ ಕನವರಿಕೆಗೆ ಬೆಲೆ ಕೊಡಲಾರದೆ ಹೋದೆಯಾ ಗೆಳೆಯ

ನಿನ್ನೊಡನೆ ಜಗವ ಕಾಣಬೇಕು ನಿನ್ನೊಡನೆ ಬಾಳ ನಡೆಸಬೇಕು
ನಿನ್ನೊಡನೆ ಸಂತಸ ,ನೆಮ್ಮದಿ ,ಸುಖ ,ದುಖ: ಹಂಚಿ ಪ್ರೀತಿಯನ್ನು ಜೈಸಬೇಕು
ನನ್ನ ಈ ಕನಸಿಗೆ ರೂಪ ಕೊಡಲಾರದೆ ಹೋದೆಯಾ ಗೆಳೆಯ 
 
 ಮರಳಿ ಬಾರೋ ನಾನೆಂದೂ ನಿನ್ನವಳೇ
ಮರಳಿ ಬಾರೋ ನಾನ್ನಿನು ನಿನಗೆ ಕಾದಿರುವೆ
ಮರಳಿ ಬಾರೋ ನನ್ನ ಮುದ್ದು ಗೆಳೆಯ ನಿನಗಾಗಿ ನನ್ನ ಜೀವವ ಮುಡಿಪಿಡುವೆ.

No comments:

Post a Comment