ನೀ ತಂದ ಕಾಣಿಕೇ ನೀ ಕೊಟ್ಟ ಉಡುಗೊರೆ
ಇವೆಲ್ಲ ನಿನ್ನ ನೆನಪನ್ನು ಕಾಡಿಸುತಲ್ಲನ ದೊರೆ
ನಾ ಹೇಗಿರಲಿ ಇವೆಲ್ಲಾ ಇನ್ನೂ ನನ್ನ ಬಳಿ ಇದೆಯಲ್ಲ
ಪ್ರತಿ ದಿನ ನೋಡಿ ನಿನ್ನ ಛಾಯಾ ಚಿತ್ರ
ಕಣ್ಣೀರ ಕೊಡಿ ಹರಿಸಿ ಮಾತ್ರ
ಮರೆತರೂ ಮರೆಯಲಾಗದೆ ನಾ ನಿನ್ನ ನೆನಪಲ್ಲೇ ಇರುವೆನಲ್ಲ
ನೀ ಕೊಡಿಸಿದ ಬಟ್ಟೆ ನಾ ಅದನ್ನ ಎಷ್ಟು ಇಷ್ಟ ಪಟ್ಟೆ
ಎಷ್ಟು ಚೆನ್ನಾಗಿದೆ ಅಂತ ಹೇಳಿದಯಲ್ಲ
ಮನಸ್ಸಿಲ್ಲ ತೊಡಲು ಅದನ್ನೀಗ
ಚೆನ್ನಾಗಿದೆ ಅಂತ ಹೇಳೋ ನೀನೇ ಇಲ್ಲದಿರುವಾಗ
ಇಟ್ಟಿರುವೆ ಸಾಲಾಗಿ ನಿನ್ನ ನೆನಪಿನ ಕುರುಹುಗಳನ್ನ
ನನ್ನ ಜೀವನದ ಮೊದಲ ಕನಸುಗಳನ್ನ
ಒಂದೊಮ್ಮೆ ಹಿಂದಿರುಗಿ ಬಂದು ನೋಡು
ಜೋಪಾನವಾಗಿದೆಯಾ ಎಂದು ನಿನ್ನ ಸೊತ್ತುಗಳನ್ನ
ಜೊತೆಗೆ ನಿನಗಾಗಿ ಕಾದಿರುವ ನನ್ನನ
No comments:
Post a Comment