Saturday, May 26, 2012

ಜತನ


ನೀ ತಂದ ಕಾಣಿಕೇ ನೀ ಕೊಟ್ಟ ಉಡುಗೊರೆ 
ಇವೆಲ್ಲ ನಿನ್ನ ನೆನಪನ್ನು ಕಾಡಿಸುತಲ್ಲನ ದೊರೆ  
ನಾ ಹೇಗಿರಲಿ ಇವೆಲ್ಲಾ  ಇನ್ನೂ ನನ್ನ ಬಳಿ ಇದೆಯಲ್ಲ 

ಪ್ರತಿ ದಿನ ನೋಡಿ ನಿನ್ನ ಛಾಯಾ ಚಿತ್ರ 
ಕಣ್ಣೀರ ಕೊಡಿ ಹರಿಸಿ ಮಾತ್ರ  
ಮರೆತರೂ ಮರೆಯಲಾಗದೆ ನಾ ನಿನ್ನ ನೆನಪಲ್ಲೇ ಇರುವೆನಲ್ಲ 

ನೀ ಕೊಡಿಸಿದ ಬಟ್ಟೆ ನಾ ಅದನ್ನ ಎಷ್ಟು ಇಷ್ಟ ಪಟ್ಟೆ 
ಎಷ್ಟು ಚೆನ್ನಾಗಿದೆ ಅಂತ ಹೇಳಿದಯಲ್ಲ 
ಮನಸ್ಸಿಲ್ಲ ತೊಡಲು ಅದನ್ನೀಗ 
ಚೆನ್ನಾಗಿದೆ ಅಂತ ಹೇಳೋ ನೀನೇ ಇಲ್ಲದಿರುವಾಗ

ಇಟ್ಟಿರುವೆ ಸಾಲಾಗಿ ನಿನ್ನ ನೆನಪಿನ ಕುರುಹುಗಳನ್ನ
ನನ್ನ ಜೀವನದ ಮೊದಲ ಕನಸುಗಳನ್ನ 
ಒಂದೊಮ್ಮೆ ಹಿಂದಿರುಗಿ ಬಂದು ನೋಡು 
ಜೋಪಾನವಾಗಿದೆಯಾ ಎಂದು ನಿನ್ನ ಸೊತ್ತುಗಳನ್ನ 
ಜೊತೆಗೆ ನಿನಗಾಗಿ ಕಾದಿರುವ ನನ್ನನ 




Friday, May 11, 2012

ನೆನಪು

ನನ್ನ ಪ್ರೀತಿಯ ಕಡೆಗಣಿಸಿ ಹೋದೆಯಾ ಗೆಳೆಯ
ನಿನ್ನ ಗೆಳತಿ ನಾನೆಂದು ಬೀಗುತಿದ್ದೆನಲ್ಲ
ನನ್ನ ಪ್ರೀತಿಗೆ ಕಳಂಕ ಹೊದೆಸಿ ಹೋದೆಯಾ ಗೆಳೆಯ

ನಿನಗಾಗಿ ಎಸ್ಟೊಂದು ಪರಿತಪಿಸಿದೆನಲ್ಲ
ಪ್ರತಿ ನಿಮಿಷ ನಿನಗಾಗಿ ಹಂಬಲಿಸಿದೆನಲ್ಲ
ನನ್ನ ಕನವರಿಕೆಗೆ ಬೆಲೆ ಕೊಡಲಾರದೆ ಹೋದೆಯಾ ಗೆಳೆಯ

ನಿನ್ನೊಡನೆ ಜಗವ ಕಾಣಬೇಕು ನಿನ್ನೊಡನೆ ಬಾಳ ನಡೆಸಬೇಕು
ನಿನ್ನೊಡನೆ ಸಂತಸ ,ನೆಮ್ಮದಿ ,ಸುಖ ,ದುಖ: ಹಂಚಿ ಪ್ರೀತಿಯನ್ನು ಜೈಸಬೇಕು
ನನ್ನ ಈ ಕನಸಿಗೆ ರೂಪ ಕೊಡಲಾರದೆ ಹೋದೆಯಾ ಗೆಳೆಯ 
 
 ಮರಳಿ ಬಾರೋ ನಾನೆಂದೂ ನಿನ್ನವಳೇ
ಮರಳಿ ಬಾರೋ ನಾನ್ನಿನು ನಿನಗೆ ಕಾದಿರುವೆ
ಮರಳಿ ಬಾರೋ ನನ್ನ ಮುದ್ದು ಗೆಳೆಯ ನಿನಗಾಗಿ ನನ್ನ ಜೀವವ ಮುಡಿಪಿಡುವೆ.