Friday, March 9, 2012

ನಿರೀಕ್ಷೆ

ಓ ಹುಡುಗ ನೀನೆಲ್ಲಿರುವೆ
ಹೃದಯವ ಕಲಕಿ ಮನಸನು ಕದಡಿ
ನೀನಿಲ್ಲೇ ಕಾದಿರು ನಾನೀಗ ಬಂದೆ ಎಂದು ಹೇಳಿ
ಹೋದ ಹುಡುಗ ನೀನೆಲ್ಲಿರುವೆ

ನೆನಪಿಲ್ಲವೇ ನನ್ನ ಸ್ನೇಹ
ನೆನಪಿಲ್ಲವೇ ನನ್ನ ಪ್ರೀತಿ
ನಿನಗೆ ನನ್ನ ನೆನಪಿಲ್ಲವೇ
ಓ ನನ್ನ ಸಂಗಾತಿ

ಇಲ್ಲಿ ದಿನಗಳು ವರುಷದಂತೆ
ಹಗಲಿರುಳು ಬರೀ ನಿನ್ನ ಚಿಂತೆ
ಬದುಕಲಾರೆ ನೀ ಬರದೆ ಸಾಯಲಾರೆ
ನಿನಗಾಗಿ ಮರುಳಾದಳು ನೋಡು ನಿನ್ನ ಕಾಂತೆ

ನನಗಾಗಿ ಬರಲಾರೆಯ
ಒಮ್ಮೆ ಬಂದು ನನ್ನ ನೋಡಲಾರೆಯ
ಸಾದಾ ನಿನಗಾಗಿ ಹಂಬಲಿಸುವ ಈ ಜೀವಕೆ
ಪ್ರೀತಿಯ ಸಾಂತ್ವನ ನೀಡಲಾರೆಯ ?

Friday, March 2, 2012

ಸವಿ ನೆನಪು

ಮರೆಯಲಾರೆ ನ ಬಾಲ್ಯದ ಆ ಸವಿ ನೆನಪುಗಳನ
ಅಜ್ಜನ ಮನೆಯಲ್ಲಿ ಕಳೆದ ದಿನಗಳನ


ಹಳ್ಳ ಕೆರೆಗಳಲ್ಲಿ ಈಜಾಡಿ

ಮಾವು ಹಲಸು ಗೇರು ಮರಗಳ ಕೆಳಗೆ ನಲಿದಾಡಿ

ಮೈಮರೆತು ಕಳೆದ ಬೇಸಿಗೆ ರಜೆಗಳನ

ವಾಣಿ ಸುನಿ ಸವಿ ಅಮ್ಮಿ ಚುಮ್ಮಿ ರಮ್ಮಿ

ಜೊತೆಗೆ ನಾಯಿಗಳು ಬಚ್ಚನ್ ಟಾಮಿ ಜಿಮ್ಮಿ

ಸೇರಿದಾಗ

ಇರಲಿಲ್ಲ ನಾವು ಯಾರಿಗಿಂತಲೂ ಕಮ್ಮಿ

ತೋಟಕ್ಕೆ ಇಳಿದು ಅಡಿಕೆ ಹೆಕ್ಕುವ

ಗುಡ್ಡ ಹತ್ತಿ ಗೇರು ಕೊಯ್ಯುವ

ಆಟ ಆಡುತ ಕಲಿತ ಪಾಠ

ಇಂದಿಗೂ ಮರೆಯಲಾರೆ

ಒಟ್ಟಿಗೆ ಕುಳಿತು ಮಾಡಿದ ಬೆಳದಿಂಗಳ ಊಟ


ಮರೆಯಲಾರೆ ನ ಬಾಲ್ಯದ ಆ ಸವಿ ನೆನಪುಗಳನ
ಅಜ್ಜನ ಮನೆಯಲ್ಲಿ ಕಳೆದ ದಿನಗಳನ