ನೇತ್ರಾವತಿ ಯಿಂದ ಶರಾವತಿ ಯ ವರೆಗೆ
ನೇತ್ರಾವತಿಯ ಮಗಳೊಂದಿಗೆ ಆಗಿದೆ ಶರಾವತಿಯ ಮಗನ ಪರಿಣಯ
ನೇತ್ರಾವತಿ ಯಿಂದ ಶರಾವತಿ ಯ ವರೆಗೆ ಸಾಗಿದೆ ಬಾಳ ಪಯಣ .
ಮನದಲ್ಲಿ ಹೊಸ ಹರುಷ ಎದೆಯೊಳಗೆ ಪ್ರೀತಿಯ ವರ್ಷಾ
ಹೊಸ ಕನಸುಗಳ ಜೊತೆ ಶುರುವಾಗಿದೆ ಜೀವನ
ಹುಟ್ಟೂರಿನಿಂದ ಇನಿಯನೂರಿಗೆ ಸಾಗಿದೆ ಬಾಳ ಪಯಣ
ಹಡೆದಳು ನೇತ್ರಾವತಿ ಪ್ರೀತಿಸಿದಳು ಶರಾವತಿ
ಕೈ ಎತ್ತಿ ಹರಸಿದಳು ನೇತ್ರಾವತಿ ಕೈ ಬೀಸಿ ಕರೆಯುತಿಹಳು ಶರಾವತಿ
ತವರೂರಿಗೇ ಹೆಚ್ಚಾಗಿ ಕಂಡಿತು ನಿನ್ನ ಪ್ರೀತಿ
ಎರಡು ನದಿಗಳು ಎಂದೋ ಒಂದೇ ಕಡಲನ್ನು ಸೇರಾಗಿದೆ
ಗೊತ್ತಿಲದೇನೆ ಇಬ್ಬರು ಒಂದೇ ಕಡಲ ತಡಿಯಲ್ಲಿ ಬೆಳೆದಾಗಿದೆ
ನಮ್ಮಿಬ್ಬರ ಮಿಲನ ಎಂದೋ ಬರೆದಾಗಿದೆ
ಹೆತ್ತಬ್ಬೆ ,ಕಡಲಬ್ಬೆ ಸಲಹಬ್ಬೆ ಈ ಪರಿಣಿತೆಯಾ
ನೇತ್ರಾವತಿ ಯಿಂದ ಶರಾವತಿ ಯಲ್ಲಿ ಬದುಕು ಕಟ್ಟ ಹೊರಟ ಈ ನಿನ್ನ ಮಗಳ .
ನೇತ್ರಾವತಿಯ ಮಗಳೊಂದಿಗೆ ಆಗಿದೆ ಶರಾವತಿಯ ಮಗನ ಪರಿಣಯ
ನೇತ್ರಾವತಿ ಯಿಂದ ಶರಾವತಿ ಯ ವರೆಗೆ ಸಾಗಿದೆ ಬಾಳ ಪಯಣ .