ಅಂದು ಮನೆಗೆ ಬರಲು ಹಂಬಲಿಸಿದ ಮಗ
ಆದರೆ ಹಡೆದವರ ಮನಸ್ಸಿಗೆ ಹುಳಿ ಹಿಂಡಿತ್ತು ಜಗ
ಜಗಕೆ ಬೇಡವಾಗಿತ್ತು ಮಗನೊಡನೆ ಬರುವ ಅವನ ಜಗ
ಅವನನ್ನು ಮನೆಯಿಂದಲೇ ನೂಕಿತ್ತು ಕಪಟ ಮೊಗ
ಅಂದು ಮನೆ ಮಗನನ್ನು ಮರೆತರೂ
ಮಗ ಮನೆಯನ್ನು ಮರೆಯಲಿಲ್ಲ
ಕಷ್ಟಗಳ ಕೋಟಲೆಯಲ್ಲಿ ಸಿಲುಕಿದ್ದರೂ
ಹಡೆದವರನ್ನು ಪೀಡಿಸಿ ಕಾಡಲಿಲ್ಲ
ಕಾಣಲಿಲ್ಲ ಮಗನ ಮನಸ್ಸಿನ ವೇತನೇ
ಕೇಳಲಿಲ್ಲಅವನ ಮೂಖ ರೋದನೆ
ಮರೆತ ಮನೆ ಇಂದು ಮಗ ಬರಲಿಲ್ಲವೆಂದು ದೂಷಿಸಿದೆ
ಕಪಟ ಮೊಗ ಕುಟಿಲ ತಂತ್ರ ರೂಪಿಸಿದೆ
ಅಂದಿಗೂ ಇಂದಿಗೂ ಎಂದೆಂದಿಗೂ ಮಗ ಮೌನಿ
ಭಾವನೆಗಳನ್ನು ಎದೆಯೊಳಗಿರಿಸಿ ಹೋರಾಡಿದ ಶೂರಿ
ಪರರ ಮಾತಿಗೆ ತಲೆ ಬಾಗಿದ ಹಡೆದವರು
ಮಗನ ಮನಸ್ಸನ್ನು ಅರಿಯದೇನೇ ಹೋದರು ..